ಮತ್ತೆ ಬಂದಿದೆ ಯುಗಾದಿ | ಕವನ | ವೆಂಕಟೇಶ ಚಾಗಿ | Matte Bandide Yugaadi | kavana | venkatesh chagi

 



** ಮತ್ತೆ ಬಂದಿದೆ ಯುಗಾದಿ **


ಮತ್ತೆ ಬಂದಿದೆ ಯುಗಾದಿ
ಹರುಷ ತಂದಿದೆ ನಮಗಾಗಿ
ಚಿಗುರು ತುಂಬಿ ಚೆಲುವ ಚೆಲ್ಲಿ
ಹೊಸ ಸಂಭ್ರಮ ತಂದಿದೆ..||

ರೆಂಬೆ ಕೊಂಬೆ ಚಿಗುರು ಚಿಮ್ಮಿ
ಹಕ್ಕಿ ದ್ವನಿಗೆ ಸ್ವರವು ತುಂಬಿ
ಯುಗದ ಆದಿ ಬಂದಿದೆ
ಯುಗಾದಿ ಮರಳಿ ಬಂದಿದೆ..||

ಬೇವು ಬೆಲ್ಲ ಜೊತೆಗೆ ಸೇರಿ
ಸುಖ ದುಃಖಕೆ ನಾಂದಿ ಹಾಡಿ
ನವ ಜೀವನದ ಸೆಲೆಯ ತಂದು
ಯುಗಾದಿ ಮರಳಿ ಬಂದಿದೆ..||

ಹೃದಯಗಳನು ಬೆಸೆಯುತಿದೆ
ಬಯಕೆಗಳನು ಮೂಡಿಸಿದೆ
ಹೊಸ ಬದುಕಿಗೆ ಉಸಿರು ತುಂಬಿ
ಯುಗಾದಿ ಮರಳಿ ಬಂದಿದೆ..||

ಮೇಘಗಳಲಿ ಮಿಂಚಿದೆ
ಧರೆಯು ಹನಿಗೆ ನನೆದಿದೆ
ಮಣ್ಣಿನಲ್ಲಿ ಜೀವ ಬಿತ್ತಿ
ಯುಗಾದಿ ಮರಳಿ ಬಂದಿದೆ..||

- ✍ ವೆಂಕಟೇಶ ಚಾಗಿ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಗು | ಕವನ | ವೆಂಕಟೇಶ ಚಾಗಿ | nagu | kavana | venkatesh chagi

ಧರೆ | ಕವನ | ವೆಂಕಟೇಶ ಚಾಗಿ | DHARE | KAVANA | VENKATESH CHAGI