ಧರೆ | ಕವನ | ವೆಂಕಟೇಶ ಚಾಗಿ | DHARE | KAVANA | VENKATESH CHAGI



 ಧರೆ


(ಕವನ )


ದೇವರ ಸೃಷ್ಟಿ ನಮ್ಮೀ ಧರೆಯು

ಎಲ್ಲರೂ ಬದುಕಲು ಆಸರೆಯು

ಹುಟ್ಟು ಸಾವಿನ ಅವಧಿಯೊಳಗೆ

ಬದುಕುವ ಚಂದದಿ ಧರೆಯೊಳಗೆ ||


ಪ್ರಕೃತಿ ಸೊಬಗು ಬೇರೆಡೆ ಕಾಣದು

ಧರೆಯೇ ನಮ್ಮಯ ದೇಗುಲವು

ಗಿಡಮರ ಬಳ್ಳಿಗೂ ಬದುಕು ಉಂಟು

ಎಂದಿಗೂ ಅಳಿಯದು ಈ ನಂಟು ||


ಹಗಲು ಇರುಳು ದೈವದ ವರವು

ಶ್ರಮವೇ ಸಾಧನೆಯಾ ಬಲವು

ಆಸೆಯಿಂದಲಿ ಧರೆಯ ನುಂಗಲು

ನಾಳೆಗೆ ಇರದು ಈ ಧರೆಯು ||


ಸಾಗರವಿರಲಿ ನೆಲವೇ ಇರಲಿ

ಯಾವುದೋ ಜೀವಿಗೆ ಮನೆಯಂತೆ

ಕಲುಷಿತಗೊಳಿಸದೆ ಇರಲು ಬಿಟ್ಟರೆ

ಧರೆಯು ಎಂದಿಗೂ ಸ್ವರ್ಗವೆ ಅಂತೆ ||


ತಿಳಿದು ಬದುಕುವ ಮನುಜರು ನಾವು

ಧರೆಯ ಅಳಿವನು ಬಯಸುವುದೆಂತು

ಶಾಂತಿಯ ಉಳಿಸಿ ಒಳಿತನು ಬಯಸಿ

ಬದುಕುವ ಅನುದಿನ ಜಗವರಿತು ||


=> ವೆಂಕಟೇಶ ಚಾಗಿ

👉ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ👈

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಗು | ಕವನ | ವೆಂಕಟೇಶ ಚಾಗಿ | nagu | kavana | venkatesh chagi

ಮತ್ತೆ ಬಂದಿದೆ ಯುಗಾದಿ | ಕವನ | ವೆಂಕಟೇಶ ಚಾಗಿ | Matte Bandide Yugaadi | kavana | venkatesh chagi