ಪೋಸ್ಟ್‌ಗಳು

ಜನವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬನ್ನಿ ಬದಲಾಗೋಣ | ಕವನ | ವೆಂಕಟೇಶ ಚಾಗಿ | BANNI BADALAGONA | KAVANA | VENKATESH CHAGI

ಇಮೇಜ್
 **ಬನ್ನಿ ಬದಲಾಗೋಣ** ಅದೇ ಹಳೆಯ ಸೆರೆಮನೆಗೆ ಅದ್ದೂರಿ ಅಲಂಕಾರವ ಮಾಡಿ ಸುಖದ ಸುಪ್ಪತ್ತಿಗೆಯ ಮಾತು ಮನವ ಕರಗಿಸುವ ನೋಟ ಜಗದ ಸಂಭ್ರಮಕೆ ಓಟ ಎಷ್ಟು ದಿನ ಈ ನಾಟಕ ಬನ್ನಿ ಬದಲಾಗೋಣ...!! ಕಲ್ಲುಗಳು ಕರಗುತಿವೆ ಪ್ರತಿದಿನ ಮನವು ಕರಗುವುದು ಯಾವಾಗ ಎಲ್ಲ ಚಿಗುರುಗಳು ಕನಸುತಿವೆ ಕನ್ನಡಿಯೊಳಗೆ ಏನೋ ವಿಚಿತ್ರ ಬದಲಾಯಿಸುವ ಕಾರ್ಯತಂತ್ರ ಎಷ್ಟು ದಿನ ಈ ಅಪವ್ಯಯ ಬನ್ನಿ ಬದಲಾಗೋಣ ..!! ಮೆಟ್ಟಿಲುಗಳು ಗಟ್ಟಿಯಾಗಿಲ್ಲ ನೋಟುಗಳಾಗಿ ಬದಲಾಗುತಿವೆ ಮೇಲಿವೆ ಕೃತಕ ನಕ್ಷತ್ರಗಳು ನಕಲಿಯೋ ಅಸಲಿಯೋ ಬಿದ್ದಾಗ ಮಾತ್ರ ಎಲ್ಲವೂ ಮೌನ ಎಷ್ಟು ದಿನ ಈ ಮೋಸ ಬನ್ನಿ ಬದಲಾಗೋಣ..!! ಗೋಡೆ ಕಲ್ಲುಗಳಿಗೆ ಜೀವವ ತುಂಬಿ ದೇಹದೊಳಗೆ ಜೀವ ಇಲ್ಲವಾಗಿದೆ ಮಾತುಗಳೇ ಮಂತ್ರಗಳಾಗಿ ಜಗವನ್ನೇ ಸುತ್ತುವರಿದಿವೆ ಸೂರ್ಯನ ಬೆಳಕಿಗೂ ಬಂಧನ ಎಷ್ಟು ದಿನ ಈ ಸೆರೆವಾಸ ಬನ್ನಿ ಬದಲಾಗೋಣ..!! ಕನಸುಗಳು ಕನಸಾಗಿಯೇ ನಂದಿವೆ ಆತ್ಮಗೌರವವನೇ ದಿಕ್ಕರಿಸಿವೆ ಆಧುನಿಕತೆಯ ಹಾದಿಯಲಿ ಯಾವುದಕ್ಕೆ ಗೆಲುವು ? ಮಾನವೀಯತೆಯ ಸೋಲಷ್ಟೆ ಎಷ್ಟು ದಿನ ಈ ಕಹಿ ಸಹನೆ ಬನ್ನಿ ಬದಲಾಗೋಣ..!! => ವೆಂಕಟೇಶ ಚಾಗಿ 👉 ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 👈

ಧರೆ | ಕವನ | ವೆಂಕಟೇಶ ಚಾಗಿ | DHARE | KAVANA | VENKATESH CHAGI

ಇಮೇಜ್
 ಧರೆ (ಕವನ ) ದೇವರ ಸೃಷ್ಟಿ ನಮ್ಮೀ ಧರೆಯು ಎಲ್ಲರೂ ಬದುಕಲು ಆಸರೆಯು ಹುಟ್ಟು ಸಾವಿನ ಅವಧಿಯೊಳಗೆ ಬದುಕುವ ಚಂದದಿ ಧರೆಯೊಳಗೆ || ಪ್ರಕೃತಿ ಸೊಬಗು ಬೇರೆಡೆ ಕಾಣದು ಧರೆಯೇ ನಮ್ಮಯ ದೇಗುಲವು ಗಿಡಮರ ಬಳ್ಳಿಗೂ ಬದುಕು ಉಂಟು ಎಂದಿಗೂ ಅಳಿಯದು ಈ ನಂಟು || ಹಗಲು ಇರುಳು ದೈವದ ವರವು ಶ್ರಮವೇ ಸಾಧನೆಯಾ ಬಲವು ಆಸೆಯಿಂದಲಿ ಧರೆಯ ನುಂಗಲು ನಾಳೆಗೆ ಇರದು ಈ ಧರೆಯು || ಸಾಗರವಿರಲಿ ನೆಲವೇ ಇರಲಿ ಯಾವುದೋ ಜೀವಿಗೆ ಮನೆಯಂತೆ ಕಲುಷಿತಗೊಳಿಸದೆ ಇರಲು ಬಿಟ್ಟರೆ ಧರೆಯು ಎಂದಿಗೂ ಸ್ವರ್ಗವೆ ಅಂತೆ || ತಿಳಿದು ಬದುಕುವ ಮನುಜರು ನಾವು ಧರೆಯ ಅಳಿವನು ಬಯಸುವುದೆಂತು ಶಾಂತಿಯ ಉಳಿಸಿ ಒಳಿತನು ಬಯಸಿ ಬದುಕುವ ಅನುದಿನ ಜಗವರಿತು || => ವೆಂಕಟೇಶ ಚಾಗಿ 👉 ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 👈

ಬಿಟ್ಟುಬಿಡಿ ನನ್ನ | ಕವನ | ವೆಂಕಟೇಶ ಚಾಗಿ | bittu bidi nanna | kavana | venkatesh chagi

ಇಮೇಜ್
  **ಬಿಟ್ಟುಬಿಡಿ ನನ್ನ** ನೂರಾರು ಕನಸುಗಳ ಬಿತ್ತಿ ಬದುಕುವ ಆಸೆ ಎಮ್ಮರವಾಗಿಸಿ  ನೀವೇನು ಸಾಧಿಸಿದಿರಿ  ಸ್ವಚ್ಛಂದವಾದ ಕನಸಲಿ ಮಿಂದು  ಆಗಸದ ಹಕ್ಕಿಯಾಗಿದ್ದ ನಾನು  ನಿಮಗೆ ಏಕೆ ಬಲಿಯಾಗಲಿ  ಒಬ್ಬಂಟಿಯಾದರೂ ಬದುಕುವೆ  ನಗುವ ಹಂಚಿ ಬಿಟ್ಟುಬಿಡಿ ನನ್ನ..|| ಹೊಸ ಹೊಸ ತಂತ್ರಗಳಲ್ಲಿ ಸಿಕ್ಕು  ನಾನೇನೆಂಬುದೇ ಮರೆತಿರುವೆ  ಹಗಲು ಓಟ ಇರುಳೂ ಓಟ  ಪ್ರತಿ ಗಳಿಗೆ ಏಕೆ ಈ ಆಟ  ನನ್ನ ಮನಸ್ಸಿಗೂ ದಿಗ್ಬಂದನ  ನನ್ನ ಮಾತುಗಳಿಗೂ ಈಗ ಮೌನ  ನಾನೇನು ಸಾಧಿಸಲು ಹೊರಟಿರುವೆ  ನಾನು ನಾನಾಗಬೇಕಿದೆ ಬಿಟ್ಟುಬಿಡಿ ನನ್ನ..|| ಆಗಸದ ಬಣ್ಣಗಳ ಕದಿಯುವಿರಿ  ಹಸಿರು ಹೊದಿಕೆಯ ಮಡಿಚಿದಿರಿ  ಯಾವುದು ಕಸ ಯಾವುದು ಅಮೃತ  ನಿಮ್ಮ ಮಾತುಗಳ ಹೇಗೆ ನಂಬಲಿ ನೀವಾದರೂ ಸುಖವಾಗಿರುವಿರೆ  ನ್ಯಾಯ ಅನ್ಯಾಯದ ತಿಕ್ಕಾಟ  ಹಿಂಸೆ ಅಹಿಂಸೆಯ ಜೂಜಾಟ  ನಾನು ನಿಜವಾಗುವೆ ಬಿಟ್ಟುಬಿಡಿ ನನ್ನ..|| ತಾರಾ ಗಣತಿ ಸಾಗುತ್ತಲೇ ಇದೆ  ತೃಪ್ತಿ ಎಂಬ ಬೆಳಕು ತುಂಬಾ ದೂರ  ಇರುವ ಭಾಗ್ಯ ಗಂಟು ಕಟ್ಟಿ  ನಡೆಯುತ್ತಿರುವುದು ಎಲ್ಲಿಗೆ  ಅಂತರಂಗದ ಬಾಗಿಲು ತೆರೆದಿಲ್ಲ ಇತಿಹಾಸದ ಅರಿವು ಮೂಡಿಲ್ಲ  ನೀವೆಂದಿಗೂ ನನಗೆ ನಾಯಕರಲ್ಲ  ನಾನು ಆಳಾಗಲಾರೆ ಬಿಟ್ಟುಬಿಡಿ ನನ್ನ..|| =>ವೆಂಕಟೇಶ ಚಾಗಿ 👉 ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 👈...

ಆಷಾಡದ ವಿಸ್ಮಯ | ಕವನ | ವೆಂಕಟೇಶ ಚಾಗಿ | aashaada vishmaya | kavana | venkatesh chagi

ಇಮೇಜ್
  **ಆಷಾಡದ  ವಿಸ್ಮಯ** (ಕವನ) ಓಡುವ ಮೋಡಗಳು  ಹೊತ್ತು ತರುತಲಿವೆ ಸಂದೇಶ ಹೊಸ ಉಲ್ಲಾಸದ ಸಿಂಚನ ನಿಸರ್ಗದೊಳಗೆ ಬೆರೆತಾಗ ಹೊಸದೊಂದು ರೋಮಾಂಚನ ಇದೆ ಏನು ಆಷಾಡದ ವಿಸ್ಮಯ || ಭಾವನೆಗಳಿಗೆ ಹೊಸ ಮೆರುಗು ಬದುಕಿಗೆ ಹೊಸ ಚಿಗುರು ಬೀಸು ಗಾಳಿಯ ಆ ಸಂದೇಶ ಯಾರು ಕಳಿಸಿದರು ನಾ ಕಾಣೆ ಮೋಡಗಳ ಮರೆಯಲ್ಲಿ ರವಿ ಕ್ಷಣಗಳ  ಸವಿದನು ಆ ಕವಿ ಇದೆ ಏನು ಆಷಾಡದ ವಿಸ್ಮಯ || ಮಳೆ ಹನಿಗಳೇ ಮುತ್ತುಗಳು ಅರಳಿದೆ ಮುದುಡಿದ ಮನಸ್ಸು ಯಾವ ಶಕ್ತಿ ಆವರಿಸಿತು ಯಾರ ಕನಸಿದು ನನಸಾಯಿತು ಕಾಣುವುದೆಲ್ಲಾ ವಿಸ್ಮಯ ಅನುಭವಿಸುವವನೇ ತನ್ಮಯ ಇದೇ ಏನು ಆಷಾಡದ ವಿಸ್ಮಯ || ಹಸಿರೆಲೆಗಳ ಅಂಚಿಂದ ಮಳೆ ಹನಿಗಳು ಜಾರಿ ಜಾರಿ ಮನದೊಳಗೆ  ಇಳಿಯುತಿವೆ ತನುವನ್ನು ಕುಣಿಸುತಿವೆ ಅಡಗಿಕೊಳ್ಳಲೇ ಈಗಲೇ ನಿಸರ್ಗದ ಮಡಿಲಿನೊಳಗೆ ಇದೇ ಏನು ಆಷಾಡದ ವಿಸ್ಮಯ || ವೆಂಕಟೇಶ ಚಾಗಿ 👉 ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 👈

ಮತ್ತೆ ಬಂದಿದೆ ಯುಗಾದಿ | ಕವನ | ವೆಂಕಟೇಶ ಚಾಗಿ | Matte Bandide Yugaadi | kavana | venkatesh chagi

ಇಮೇಜ್
  ** ಮತ್ತೆ ಬಂದಿದೆ ಯುಗಾದಿ ** ಮತ್ತೆ ಬಂದಿದೆ ಯುಗಾದಿ ಹರುಷ ತಂದಿದೆ ನಮಗಾಗಿ ಚಿಗುರು ತುಂಬಿ ಚೆಲುವ ಚೆಲ್ಲಿ ಹೊಸ ಸಂಭ್ರಮ ತಂದಿದೆ..|| ರೆಂಬೆ ಕೊಂಬೆ ಚಿಗುರು ಚಿಮ್ಮಿ ಹಕ್ಕಿ ದ್ವನಿಗೆ ಸ್ವರವು ತುಂಬಿ ಯುಗದ ಆದಿ ಬಂದಿದೆ ಯುಗಾದಿ ಮರಳಿ ಬಂದಿದೆ..|| ಬೇವು ಬೆಲ್ಲ ಜೊತೆಗೆ ಸೇರಿ ಸುಖ ದುಃಖಕೆ ನಾಂದಿ ಹಾಡಿ ನವ ಜೀವನದ ಸೆಲೆಯ ತಂದು ಯುಗಾದಿ ಮರಳಿ ಬಂದಿದೆ..|| ಹೃದಯಗಳನು ಬೆಸೆಯುತಿದೆ ಬಯಕೆಗಳನು ಮೂಡಿಸಿದೆ ಹೊಸ ಬದುಕಿಗೆ ಉಸಿರು ತುಂಬಿ ಯುಗಾದಿ ಮರಳಿ ಬಂದಿದೆ..|| ಮೇಘಗಳಲಿ ಮಿಂಚಿದೆ ಧರೆಯು ಹನಿಗೆ ನನೆದಿದೆ ಮಣ್ಣಿನಲ್ಲಿ ಜೀವ ಬಿತ್ತಿ ಯುಗಾದಿ ಮರಳಿ ಬಂದಿದೆ..|| - ✍ ವೆಂಕಟೇಶ ಚಾಗಿ ಮತ್ತಷ್ಟು ಓದಿ 👉  ಕಗ್ಗಗಳು (click here) 👉 ಗಜಲ್ ಗಳು (click here) 👉 ಕವನಗಳು (click here ) 👉 ಕವಿತೆಗಳು (click here ) 👉 ಹಾಯ್ಕುಗಳು ( click here) 👉 ಹನಿಗವನಗಳು (click here ) 👉 ಮಕ್ಕಳ ಕಥೆಗಳು (click here) 👉 ಮಕ್ಕಳ ಕವನಗಳು (click here 👉 ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 👈