ಬಿಟ್ಟುಬಿಡಿ ನನ್ನ | ಕವನ | ವೆಂಕಟೇಶ ಚಾಗಿ | bittu bidi nanna | kavana | venkatesh chagi

 


**ಬಿಟ್ಟುಬಿಡಿ ನನ್ನ**


ನೂರಾರು ಕನಸುಗಳ ಬಿತ್ತಿ

ಬದುಕುವ ಆಸೆ ಎಮ್ಮರವಾಗಿಸಿ 

ನೀವೇನು ಸಾಧಿಸಿದಿರಿ 

ಸ್ವಚ್ಛಂದವಾದ ಕನಸಲಿ ಮಿಂದು 

ಆಗಸದ ಹಕ್ಕಿಯಾಗಿದ್ದ ನಾನು 

ನಿಮಗೆ ಏಕೆ ಬಲಿಯಾಗಲಿ 

ಒಬ್ಬಂಟಿಯಾದರೂ ಬದುಕುವೆ 

ನಗುವ ಹಂಚಿ ಬಿಟ್ಟುಬಿಡಿ ನನ್ನ..||



ಹೊಸ ಹೊಸ ತಂತ್ರಗಳಲ್ಲಿ ಸಿಕ್ಕು 

ನಾನೇನೆಂಬುದೇ ಮರೆತಿರುವೆ 

ಹಗಲು ಓಟ ಇರುಳೂ ಓಟ 

ಪ್ರತಿ ಗಳಿಗೆ ಏಕೆ ಈ ಆಟ 

ನನ್ನ ಮನಸ್ಸಿಗೂ ದಿಗ್ಬಂದನ 

ನನ್ನ ಮಾತುಗಳಿಗೂ ಈಗ ಮೌನ 

ನಾನೇನು ಸಾಧಿಸಲು ಹೊರಟಿರುವೆ 

ನಾನು ನಾನಾಗಬೇಕಿದೆ ಬಿಟ್ಟುಬಿಡಿ ನನ್ನ..||


ಆಗಸದ ಬಣ್ಣಗಳ ಕದಿಯುವಿರಿ 

ಹಸಿರು ಹೊದಿಕೆಯ ಮಡಿಚಿದಿರಿ 

ಯಾವುದು ಕಸ ಯಾವುದು ಅಮೃತ 

ನಿಮ್ಮ ಮಾತುಗಳ ಹೇಗೆ ನಂಬಲಿ

ನೀವಾದರೂ ಸುಖವಾಗಿರುವಿರೆ 

ನ್ಯಾಯ ಅನ್ಯಾಯದ ತಿಕ್ಕಾಟ 

ಹಿಂಸೆ ಅಹಿಂಸೆಯ ಜೂಜಾಟ 

ನಾನು ನಿಜವಾಗುವೆ ಬಿಟ್ಟುಬಿಡಿ ನನ್ನ..||


ತಾರಾ ಗಣತಿ ಸಾಗುತ್ತಲೇ ಇದೆ 

ತೃಪ್ತಿ ಎಂಬ ಬೆಳಕು ತುಂಬಾ ದೂರ 

ಇರುವ ಭಾಗ್ಯ ಗಂಟು ಕಟ್ಟಿ 

ನಡೆಯುತ್ತಿರುವುದು ಎಲ್ಲಿಗೆ 

ಅಂತರಂಗದ ಬಾಗಿಲು ತೆರೆದಿಲ್ಲ

ಇತಿಹಾಸದ ಅರಿವು ಮೂಡಿಲ್ಲ 

ನೀವೆಂದಿಗೂ ನನಗೆ ನಾಯಕರಲ್ಲ 

ನಾನು ಆಳಾಗಲಾರೆ ಬಿಟ್ಟುಬಿಡಿ ನನ್ನ..||


=>ವೆಂಕಟೇಶ ಚಾಗಿ

👉ಮುಂದಿನ ಕವನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ👈

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಗು | ಕವನ | ವೆಂಕಟೇಶ ಚಾಗಿ | nagu | kavana | venkatesh chagi

ಧರೆ | ಕವನ | ವೆಂಕಟೇಶ ಚಾಗಿ | DHARE | KAVANA | VENKATESH CHAGI

ಮತ್ತೆ ಬಂದಿದೆ ಯುಗಾದಿ | ಕವನ | ವೆಂಕಟೇಶ ಚಾಗಿ | Matte Bandide Yugaadi | kavana | venkatesh chagi